ಟಾಟಾ ಮೋಟಾರ್ಸ್ನಲ್ಲಿ, ನಿಮ್ಮ ವ್ಯಾಪಾರವನ್ನು ಕೇವಲ ವಿಶ್ವ ದರ್ಜೆಯ ಟ್ರಕ್ಗಳಲ್ಲದೇ, ಅಪ್ಟೈಮ್ ಮತ್ತು ತಡೆರಹಿತ ಕಾರ್ಯಕ್ಷಮತೆಯನ್ನು ಖಾತ್ರಿಪಡಿಸುವ ಅಸಾಧಾರಣ ಸೇವೆಯೊಂದಿಗೆ ಸಬಲೀಕರಣಗೊಳಿಸುವಲ್ಲಿ ನಾವು ನಂಬಿಕೆ ಇಡುತ್ತೇವೆ. ಅದಕ್ಕಾಗಿಯೇ ನಿಮ್ಮ ಟಾಟಾ ಮೋಟಾರ್ಸ್ ಟ್ರಕ್, ಸೇವೆ ಮತ್ತು ರಸ್ತೆಬದಿಯ ಸಹಾಯದೊಂದಿಗೆ ವಿಮೆ, ನಿಷ್ಠೆ ಮತ್ತು ಇನ್ನೂ ಹೆಚ್ಚಿನದನ್ನು ಒಳಗೊಂಡಿರುವ ಅನುಕೂಲಗಳ ಜಗತ್ತನ್ನು ಹೊಂದಿದೆ. ಹೊಚ್ಚಹೊಸ ಸಂಪೂರ್ಣ ಸೇವಾ 2.0 ಅನ್ನು ಮನಃಶಾಂತಿ ಒದಗಿಸಲು ವಿನ್ಯಾಸಗೊಳಿಸಲಾಗಿದೆ ಇದರಿಂದ ನೀವು ಬೆಳವಣಿಗೆಯ ಮೇಲೆ ಹೆಚ್ಚು ಮತ್ತು ನಿರ್ವಹಣೆಯ ಮೇಲೆ ಕಡಿಮೆ ಗಮನ ನೀಡಬಹುದು.
ಟಾಟಾ ಮೋಟಾರ್ಸ್ನ ಸಂಪೂರ್ಣ ಸೇವಾ ನಿಮ್ಮ ವ್ಯಾಪಾರಕ್ಕಾಗಿ ಸಂಪೂರ್ಣ ಆರೈಕೆಯ ಪ್ಯಾಕೇಜ್ ಆಗಿದೆ. ಇದು ನಿಮ್ಮ ವಾಹನವನ್ನು ಖರೀದಿಸಿದ ಕ್ಷಣದಿಂದ ಆರಂಭವಾಗಿ ಪ್ರಯಾಣದ ಪ್ರತಿ ಹಂತದಲ್ಲೂ ನಿಮ್ಮೊಂದಿಗೆ ಇರುತ್ತದೆ. ಅದು ವಿಮೆ ಅಥವಾ ಸ್ಥಗಿತ, ಬಹುಮಾನಗಳು ಅಥವಾ ಅಸಲಿ ಬಿಡಿಭಾಗಗಳು, ಮರುಮಾರಾಟ ಅಥವಾ ವಾರಂಟೀ ಇವೆಲ್ಲವುಗಳನ್ನು ಸಂಪೂರ್ಣ ಸೇವಾ 2.0 ಒಳಗೊಂಡಿದೆ.
ಕಳೆದ ವರ್ಷದಲ್ಲಿ ನಮ್ಮ ಕೇಂದ್ರಗಳಿಗೆ ಭೇಟಿ ನೀಡಿದ 6.5 ಮಿಲಿಯನ್ಗಿಂತಲೂ ಹೆಚ್ಚು ಗ್ರಾಹಕರ ಪ್ರತಿಕ್ರಿಯೆಯನ್ನು ಸಂಗ್ರಹಿಸಿ ಮತ್ತು ವಿಶ್ಲೇಷಿಸಿದ ನಂತರವೇ ಸಂಪೂರ್ಣ ಸೇವಾ 2.0 ಅನ್ನು ಚಿಂತನಶೀಲವಾಗಿ ರಚಿಸಲಾಗಿದೆ. ಗ್ರಾಹಕರ ಅಗತ್ಯಗಳನ್ನು ಅತ್ಯುತ್ತಮವಾಗಿ ಪೂರೈಸಲು ಸದಾ ವಿಕಸನಗೊಳ್ಳುತ್ತಿದೆ, ನೀವು ಸೌಲಭ್ಯಗಳನ್ನು ಸುಲಭಸಾಧ್ಯವಾಗುವಂತೆ ನಾವು ಇದನ್ನು ಸಂಯೋಜಿಸಿದ್ದೇವೆ.
ಇದರ ಜೊತೆಗೆ, ನೀವು ಟಾಟಾ ಮೋಟಾರ್ಸ್ನ ವಿಶಾಲವಾದ ನೆಟ್ವರ್ಕ್ನ ಬೆಂಬಲವನ್ನು ಪಡೆಯುತ್ತೀರಿ. 29 ರಾಜ್ಯಗಳಲ್ಲಿರುವ ಸೇವಾ ಆಫೀಸರುಗಳು, 250+ ಟಾಟಾ ಮೋಟಾರ್ಸ್ ಎಂಜಿನಿಯರ್ಗಳು, ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಅತ್ಯಾಧುನಿಕ ಕೇಂದ್ರಗಳು ಮತ್ತು 24x7 ಮೊಬೈಲ್ ವ್ಯಾನ್ಗಳನ್ನು ಒಳಗೊಂಡಿರುವ 1500 ಚಾನೆಲ್ ಪಾಲುದಾರರು ನಿಮಗೆ ಅಗತ್ಯವಿರುವಾಗ ಮತ್ತು ಎಲ್ಲಿ ಬೇಕಾದರೂ ಸಹಾಯವನ್ನು ಒದಗಿಸಲು ಸಿದ್ಧರಿರುತ್ತಾರೆ.
ಏಕೆಂದರೆ, ಟಾಟಾ ಮೋಟಾರ್ಸ್ ಪ್ರತಿ ಹೆಜ್ಜೆಯಲ್ಲಿಯೂ ನಿಮ್ಮೊಂದಿಗೆ ಇದೆ.
ಈ ವಾರಂಟಿಯ ಪ್ರಮುಖ ಅಂಶವೆಂದರೆ, ಇದು ನಿಮಗೆ ದಕ್ಷ ಮತ್ತು ವಿಶ್ವಾಸಾರ್ಹ ಸೇವೆಯನ್ನು ಒದಗಿಸಲು ಬದ್ಧವಾಗಿರುವ ಸೇವಾ ಸೌಲಭ್ಯಗಳೊಂದಿಗೆ 1500+ ಟಚ್ಪಾಯಿಂಟ್ಗಳ ಬೃಹತ್, ದೇಶ-ವ್ಯಾಪಿ ಟಾಟಾ ಮೋಟಾರ್ಸ್ ಡೀಲರ್ಶಿಪ್ ಮತ್ತು ಸೇವಾ ನೆಟ್ವರ್ಕ್ನೊಂದಿಗೆ ಬೆಂಬಲಿತವಾಗಿದೆ.
ಫೆಬ್ರವರಿ 2011 ರಿಂದ ಭಾರತದಾದ್ಯಂತ TATA ಮೋಟಾರ್ಸ್ ಗ್ರಾಹಕರ ಜೊತೆಗಿರುವ, TATA ಡಿಲೈಟ್ ಭಾರತದಲ್ಲಿನ ವಾಣಿಜ್ಯ ವಾಹನಗಳ ಉದ್ಯಮದಲ್ಲಿ ಪ್ರಪ್ರಥಮ ಗ್ರಾಹಕರ ನಿಷ್ಠೆಯ ಕಾರ್ಯಕ್ರಮವಾಗಿದೆ. ಮೊದಲಿನಿಂದಲೂ ಲಾಭದಾಯಕ ಅನುಭವಗಳನ್ನು ಖಚಿತಪಡಿಸಿಕೊಳ್ಳಲು, TATA ಮೋಟಾರ್ಸ್ ವಾಹನಗಳನ್ನು ಖರೀದಿಸುವ ಎಲ್ಲಾ ಗ್ರಾಹಕರು ಸ್ವಯಂಚಾಲಿತವಾಗಿ ಈ ಲಾಯಲ್ಟಿ ಕಾರ್ಯಕ್ರಮದ ಸದಸ್ಯರಾಗುತ್ತಾರೆ.
ಪೂರ್ವ ಸ್ವಾಮ್ಯದ TATA ಮೋಟಾರ್ಸ್ ವಾಣಿಜ್ಯ ವಾಹನಗಳನ್ನು ಮಾರಾಟ ಮಾಡಲು ಅಥವಾ ಖರೀದಿಸಲು ಬಂದಾಗ TATA ಒಕೆ ಆದ್ಯತೆಯ ಆಯ್ಕೆಯಾಗಿದೆ. TATA ಒಕೆ ಉತ್ತಮ ಮಾರುಕಟ್ಟೆ ಬೆಲೆಯ ಭರವಸೆ ಮತ್ತು ಮನೆ ಬಾಗಿಲಿಗೆ ಮತ್ತು ಉಚಿತ ಮೌಲ್ಯಮಾಪನದಂತಹ ಅನುಕೂಲತೆಗಳನ್ನು ಒದಗಿಸುತ್ತದೆ. ನೀವು ಸುಗಮ ಮಾರಾಟ ಅಥವಾ ಖರೀದಿ ಅನುಭವವನ್ನು ಹೊಂದಲು ಬೇಕಾಗಿ ನವೀಕರಿಸಿದ ವಾಹನಗಳ ಸೋರ್ಸಿಂಗ್ ಮತ್ತು ಖರೀದಿ, ಮೌಲ್ಯಮಾಪನ, ನವೀಕರಣ ಮತ್ತು ಮಾರಾಟದ ಪ್ರತಿಯೊಂದು ಹಂತದಲ್ಲೂ ನಾವು ತೊಡಗಿಸಿಕೊಂಡಿದ್ದೇವೆ.
TATA ಅಸಲಿ ಭಾಗಗಳು (ಟಿಜಿಪಿ) ನಿಮ್ಮ ವಾಹನವನ್ನು ಸುಗಮವಾಗಿ ಓಡಿಸಲು ವಿನ್ಯಾಸಗೊಳಿಸಲಾಗಿದೆ ಇದರಿಂದ ನಿಮ್ಮ ವ್ಯಾಪಾರವು ಯಾವುದೇ ಅಡೆತಡೆಗಳಿಲ್ಲದೆ ಪ್ರತಿ ವರ್ಷ ಹೆಚ್ಚು ಲಾಭದಾಯಕವಾಗಿ ಬೆಳೆಯುತ್ತದೆ. TATA ಅಸಲಿ ಭಾಗಗಳು (ಟಿಜಿಪಿ) TATA ಮೋಟಾರ್ಸ್ನ ಒಂದು ವಿಭಾಗವಾಗಿದ್ದು, TATA ವಾಣಿಜ್ಯ ವಾಹನಗಳ ನಿರ್ವಹಣೆಗಾಗಿ ಲಕ್ಷಗಟ್ಟಲೆ ಎಸ್ಕೆಯು ಗಳ ಬಿಡಿ ಭಾಗಗಳನ್ನು ಒದಗಿಸುವುದನ್ನು ಮುಂದುವರೆಸಿದೆ. TATA ಮೋಟಾರ್ಸ್ ಸೇವಾ ಕೇಂದ್ರಗಳಲ್ಲಿ, ನೀವು ವಿಶ್ವ ದರ್ಜೆಯ ಸೌಲಭ್ಯಗಳಲ್ಲಿ ತಯಾರಿಸಲಾದ TATA ಅಸಲಿ ಭಾಗಗಳ (ಟಿಜಿಪಿ) ಗ್ಯಾರಂಟಿಯನ್ನು ಪಡೆಯುತ್ತೀರಿ ಮತ್ತು ಕಠಿಣ ಗುಣಮಟ್ಟದ ತಪಾಸಣೆಗೆ ಒಳಗಾಗುತ್ತದೆ, ಇದು ಪರಿಪೂರ್ಣ ಫಿಟ್, ಹೆಚ್ಚಿದ ಸೇವಾ ಜೀವನ ಮತ್ತು ತಡೆರಹಿತ ಅಪ್ಟೈಮ್ ಗೆ ಕಾರಣವಾಗುತ್ತದೆ.
TATA ಸುರಕ್ಷಾ ಸಮಗ್ರ ಸೇವೆಯ ಮೂಲಕ ನಿಮ್ಮ ವಾಹನಕ್ಕೆ ರಕ್ಷಣೆ ನೀಡುತ್ತದೆ ಇದರಿಂದ ನಿಮ್ಮ ಉತ್ಪಾದಕತೆಯಲ್ಲಿ ಎಂದಿಗೂ ರಾಜಿಯಾಗಬೇಕಾಗಿಲ್ಲ. TATA ಸುರಕ್ಷಾ ಒಂದು ವಾರ್ಷಿಕ ನಿರ್ವಹಣಾ ಪ್ಯಾಕೇಜ್ ಆಗಿದ್ದು, ಇದು ಸಂಪೂರ್ಣ ಪ್ರತಿರೋಧಕ ಮತ್ತು ನಿಗದಿತ ನಿರ್ವಹಣೆ ಹಾಗು ವಾಹನ ಚಾಲನೆಯಲ್ಲಿ ಸ್ಥಗಿತಗೊಂಡಾಗ ದುರಸ್ತಿಗಳನ್ನು ಪೂರ್ವನಿರ್ಧರಿತ ಬೆಲೆಯಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಪ್ರಸ್ತುತ, TATA ಸುರಕ್ಷಾ ಒದಗಿಸಿದ ವಾಹನ ಆರೈಕೆಯಿಂದ ಭಾರತದಾದ್ಯಂತ 60,000+ ಗ್ರಾಹಕರು ಪ್ರಯೋಜನ ಪಡೆಯುತ್ತಿದ್ದಾರೆ. ದೀರ್ಘಾವಧಿಯ ಕಾರ್ಯಕ್ಷಮತೆಗಾಗಿ ನೀವು ಎಸ್ಸಿವಿ ಕಾರ್ಗೋ ಮತ್ತು ಪಿಕಪ್ಗಳಿಗಾಗಿ 3-ವರ್ಷದ ಒಪ್ಪಂದಗಳನ್ನು ಆರಿಸಿಕೊಳ್ಳಬಹುದು.
*TATA ಸುರಕ್ಷಾ ನಿಜವಾದ ಆಫರ್ ಪ್ಯಾಕೇಜ್ಗಳನ್ನು ಆಯಾ ಡೀಲರ್ಶಿಪ್ನಿಂದ ಪರಿಶೀಲಿಸಬೇಕು
TATA ಅಲರ್ಟ್ ನಿಮ್ಮ ವ್ಯಾಪಾರದಲ್ಲಿ ಬರುವ ಅನಿರೀಕ್ಷಿತ ರಸ್ತೆಬದಿಯ ಘಟನೆಗಳನ್ನು ಪರಿಣಾಮಕಾರಿಯಾಗಿ ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಪ್ರಕ್ರಿಯೆಯ ಒತ್ತಡವನ್ನು ಕಡಿಮೆ ಮಾಡುತ್ತದೆ. TATA ಅಲರ್ಟ್ 24x7 ರಸ್ತೆಬದಿಯ ಸಹಾಯ ಕಾರ್ಯಕ್ರಮದೊಂದಿಗೆ ನಿಮ್ಮ ಅಲಭ್ಯತೆಯನ್ನು ಕಡಿಮೆ ಮಾಡುತ್ತದೆ, ಇದು ಎಲ್ಲಾ TATA ಮೋಟಾರ್ಸ್ ವಾಣಿಜ್ಯ ವಾಹನ ಮಾದರಿಗಳಿಗೆ ವಾರಂಟಿ ಅವಧಿಯಡಿಯಲ್ಲಿ, ಪ್ರದೇಶವನ್ನು ಲೆಕ್ಕಿಸದೆ ದೇಶಾದ್ಯಂತ ಸಕಲೆಡೆ 24 ಗಂಟೆಗಳ ಒಳಗೆ ಪರಿಹಾರ ನೀಡುವ ಭರವಸೆ ನೀಡುತ್ತದೆ.
*ನಿಯಮಗಳು ಮತ್ತು ಷರತ್ತುಗಳು ಅನ್ವಯ
TATA ಮೋಟಾರ್ಸ್ನಲ್ಲಿ, ಫ್ಲೀಟ್ ಮಾಲೀಕರು ಮತ್ತು ನಿರ್ವಾಹಕರು ಎಲ್ಲಾ ಸಮಯದಲ್ಲೂ ವಿವಿಧ ಬಳಕೆಗಳಿಗಾಗಿ ವಿಭಿನ್ನ ವಾಹನಗಳ ಅಗತ್ಯವಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. TATA ಮೋಟಾರ್ಸ್ ಪ್ರೊಲೈಫ್ ಮಾಲೀಕರಿಗೆ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಅವರ ಉತ್ಪಾದಕತೆಯ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. TATA ಮೋಟಾರ್ಸ್ ಪ್ರೊಲೈಫ್ ವಾಹನದ ಅಲಭ್ಯತೆ ಮತ್ತು ಮಾಲೀಕತ್ವದ ಒಟ್ಟು ವೆಚ್ಚ ಎರಡನ್ನೂ ಕಡಿಮೆ ಮಾಡಲು ವಿನಿಮಯದ ಆಧಾರದ ಮೇಲೆ ಮರುನಿರ್ಮಿತ ಎಂಜಿನ್ಗಳನ್ನು ನೀಡುತ್ತದೆ.
ಅಪಘಾತಗಳು ಒತ್ತಡಕ್ಕೆ ಕಾರಣವಾಗಬಹುದು ಮತ್ತು ನಿಮ್ಮ ದೈನಂದಿನ ಸಾರಿಗೆ ದಿನಚರಿಗಳಿಗೆ ಅಡ್ಡಿಯಾಗಬಹುದು. TATA ಕವಚ್ ರಿಪೇರಿಯಿಂದಾಗಿ ಅಲಭ್ಯತೆಯನ್ನು ಕಡಿಮೆ ಮಾಡುವ ಮೂಲಕ ನಿಮ್ಮ ವ್ಯಾಪಾರಕ್ಕೆ ಸಹಾಯ ಮಾಡುತ್ತದೆ. ಕಡಿಮೆ ಸಂಭವನೀಯ ಆಕಸ್ಮಿಕ ದುರಸ್ತಿ ಸಮಯವನ್ನು ನೀಡುವುದರಿಂದ, TATA ಕವಚ್ ರಸ್ತೆಗೆ ಮರಳುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಆಯ್ದ ಕಾರ್ಯಾಗಾರಗಳಲ್ಲಿ ಮಾತ್ರ TATA ಮೋಟಾರ್ಸ್ ಇನ್ಶೂರೆನ್ಸ್ ಅಡಿಯಲ್ಲಿ ವಿಮೆ ಮಾಡಲಾದ ವಾಹನಗಳಿಗೆ ಇದು ಅನ್ವಯಿಸುತ್ತದೆ.
* ನಿಯಮಗಳು ಮತ್ತು ಷರತ್ತುಗಳು ಅನ್ವಯ
ವಾಹನದ ಸಮಯಕ್ಕೆ ಕೊಡುಗೆ ನೀಡುವ ವೇಗದ ಸೇವೆಯು ಯಾವುದೇ ಸಾರಿಗೆ ವ್ಯವಹಾರದ ಯಶಸ್ಸಿಗೆ ನಿರ್ಣಾಯಕವಾಗಿದೆ. TATA ಜಿಪ್ಪೀ ಎಲ್ಲಾ ಬಿಎಸ್6 ವಾಹನಗಳಿಗೆ ರಿಪೇರಿ ಸಮಯ ಭರವಸೆ ಕಾರ್ಯಕ್ರಮವಾಗಿದೆ. TATA ಜಿಪ್ಪೀ ಯೊಂದಿಗೆ, ಗ್ರಾಹಕರು ಟೋಲ್-ಫ್ರೀ ಸಂಖ್ಯೆಯ ಮೂಲಕ ವರದಿ ಸಲ್ಲಿಸಿದ ಅಥವ ವರ್ಕ್ಶಾಪ್ನಲ್ಲಿ ನೀಡಿದ ಮಾರಾಟದ ನಂತರ 12 ತಿಂಗಳೊಳಗೆ ಅಥವಾ ವಾಹನದ ಉತ್ಪಾದನೆಯ ನಂತರ 14 ತಿಂಗಳೊಳಗೆ ಇವುಗಳಲ್ಲಿ ಯಾವುದು ಮೊದಲೋ ಅದರಲ್ಲಿ ಸಮಸ್ಯೆಗೆ ತ್ವರಿತ-ಟ್ರ್ಯಾಕ್ ಸೇವೆಯ ಪ್ರಯೋಜನವನ್ನು ಪಡೆಯುತ್ತಾರೆ.
*ನಿಯಮಗಳು ಮತ್ತು ಷರತ್ತುಗಳು ಅನ್ವಯ ಮತ್ತು ಪ್ರಮಾಣಿತ ನಿರಾಕರಣೆಗಳಿಗೆ ಅನ್ವಯ